ಯಶಸ್ವಿನಿ ಯೋಜನೆಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ; ಕೊನೆಯ ದಿನಾಂಕ ಯಾವಾಗ ನೋಡಿ?

Yashaswini Card Application Last Date

ಯಶಸ್ವಿನಿ ಯೋಜನೆ ಒಂದು ಉತ್ತಮ ಆರೋಗ್ಯ ವಿಮಾ ಯೋಜನೆ ಆಗಿದೆ. ಅನಾರೋಗ್ಯದ ಸಮಯದಲ್ಲಿ ಲಕ್ಷ ಗಟ್ಟಲೆ ಹಣವನ್ನು ಆಸ್ಪತ್ರೆಗೆ ಕಟ್ಟಬೇಕಾಗುತ್ತದೆ. ಅಂತಹ ಸಮಯದಲ್ಲಿ ಹಣಕಾಸಿನ ನೆರವಿಗೆ ಅಪದ್ಭಾಂಧವನಂತೆ ಬರುವ ಯಶಸ್ವಿನಿ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2023-24 ರ ಸಾಲಿನಲ್ಲಿ ಮತ್ತೆ ಆರಂಭ ಮಾಡಿತ್ತು. ಇದರಿಂದ ಹಲವು ಮಾಧ್ಯಮ ವರ್ಗದ ಕುಟುಂಬಗಳಿಗೆ ನೇರವಾಗಿತ್ತು. ಈಗ 2024-25 ರ ಸಾಲಿನ ಯಶಸ್ವಿನಿ ಯೋಜನೆಯ ನೂತನ ನೋಂದಣಿ ಮತ್ತು ಹಳೆ ಸದಸ್ಯರು ವಿಮಾ ಯೋಜನೆಯನ್ನು ಮುಂದುವರಿಸಲು ಫೆಬ್ರುವರಿ 29 ಕೊನೆಯ ದಿನವೆಂದು ಈ ಈ ಹಿಂದೆ ಇಲಾಖೆಯು ತಿಳಿಸಿತ್ತು. ಈಗ ಈ ಯೋಜನೆಯ ಕೊನೆಯ ದಿನಾಂಕವನ್ನು ಇನ್ನೂ ಒಂದು ತಿಂಗಳು ಮುಂದೂಡಲಾಗಿದೆ.

WhatsApp Group Join Now
Telegram Group Join Now

Yashaswini ಯೋಜನೆ ಅರ್ಜಿ ಸಲ್ಲಿಸಲು ಕೊನೆಯ ದಿನ :- ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 31 ಎಂದು ಹೊಸದಾಗಿ ಇಲಾಖೆಯು ನೋಟಿಸ್ ಬಿಡುಗಡೆ ಮಾಡಿದೆ. ಇದರಿಂದ ಈಗ ಹೆಸರು ನೋಂದಣಿ ಮಾಡಿಸದೆ ಇದ್ದವರು ತಮ್ಮ ಹತ್ತಿರದ ಗ್ರಾಮೀಣ ಸಹಕಾರಿ ಸಂಘ ಅಥವಾ ಬ್ಯಾಂಕ್ ಗೆ ತೆರಳಿ ನಿಮ್ಮ ಕುಟುಂಬದ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಜೊತೆಗೆ 5ಜನರಿಗೆ 600 ರೂಪಾಯಿ ಹಾಗೂ ಐದಕ್ಕಿಂತ ಹೆಚ್ಚಿನ ಸದಸ್ಯರಿಗೆ ತಲಾ 100 ರೂಪಾಯಿ ಅಂತೆ ವಿಮಾ ಹಣವನ್ನು ಪಾವತಿ ಮಾಡಬೇಕು. ಹೊಸದಾಗಿ ಯೋಜನೆಗೆ ಹೆಸರು ನೋಂದಾಯಿಸಲು ಕುಟುಂಬ ಸದಸ್ಯರ passport size photo ಹಾಗೂ ಕುಟುಂಬ ಹಿರಿಯ ಸದಸ್ಯರ ಸಹಿ ಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿನಿ ಯೋಜನೆ ಯಾವಾಗ ಜಾರಿಗೆ ಬಂದಿತು?

ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶಗಳ ಆರೋಗ್ಯ ರಕ್ಷಣೆಯನ್ನು ಮಾಡುವ ಸಲುವಾಗಿ
2003 ಜೂನ್ 1 ರಂದು ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ಈ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯ ಮುಖ್ಯ ಉದ್ದೇಶ ಬಡ ಮತ್ತು ಮಧ್ಯಮ-ವರ್ಗದ ಕುಟುಂಬಗಳಿಗೆ ವೈದ್ಯಕೀಯ ವಿಮಾ ರಕ್ಷಣೆ ಒದಗಿಸುವುದಾಗಿದೆ.

ಇದನ್ನೂ ಓದಿ: ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಅವರು ಹೊಸ ಯೋಜನೆ ಜಾರಿ ಮಾಡಿದ್ದಾರೆ 

ಯಶಸ್ವಿನಿ ಯೋಜನೆಯ ಸೌಲಭ್ಯಗಳು :-

  • ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಿಂದ ವಾರ್ಷಿಕವಾಗೀ 5 ಲಕ್ಷ ರೂಪಾಯಿ ವರೆಗೆ ಯಾವುದೇ ಈ ಯೋಜನೆ ನೆಟ್‌ವರ್ಕ್ ಇರುವ ಆಸ್ಪತ್ರೆಗಳಲ್ಲಿ ನಗದು ರಹಿತ ಸೌಲಭ್ಯಗಳನ್ನು ಪಡೆಯಬಹುದು.
  • ಯೋಜನೆಯು 823 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದೆ.
  • ಗ್ರಾಮೀಣ ಪ್ರದೇಶದ ಸದಸ್ಯರಿಗೆ 1.25 ಲಕ್ಷ ಮತ್ತು ನಗರ ಪ್ರದೇಶದ ಸದಸ್ಯರಿಗೆ 1.75 ಲಕ್ಷದವರೆಗೆ ಒಂದು ಬಾರಿ ಆಸ್ಪತ್ರೆಗೆ ದಾಖಲಿಸಿದರೆ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಭರಿಸುತ್ತದೆ.

ಯಾವ ಯಾವ ರೋಗಗಳಿಗೆ ಈ ಯೋಜನೆಯು ಲಭ್ಯವಿದೆ?

823 ವಿವಿಧ ರೀತಿಯ ಖಾಯಿಲೆಗಳಿಗೆ ಈ ವಿಮಾ ಹಣವನ್ನು ಪಡೆಯಬಹುದು. ಪ್ರಮುಖವಾಗಿ ಹೃದಯ ಖಾಯಿಲೆಗೆ, ನರರೋಗಕ್ಕೆ, ನಾಯಿ ಅಥವಾ ಹಾವು ಕಚ್ಚಿದರೆ, ನೇತ್ರ ಚಿಕಿತ್ಸೆಗೆ, ನವಜಾತ ಶಿಶುಗಳನ್ನು ತಿರ್ವ ನಿಗಾ ಘಟಕದಲ್ಲಿ ಇರಿಸಿದ ಅಥವಾ ನವಜಾತ ಶಿಶುವಿಗೆ ಹೆಚ್ಚಿನ ಪ್ರಮಾಣದ ಚಿಕಿತ್ಸೆ ಲಭ್ಯವಿದೆ ಎಂದಾದರೆ, ಕೃಷಿ ಉಪಕರಣಗಳ ಬಳಸುವ ಸಮಯದಲ್ಲಿ ಏನಾದರೂ ತೀವ್ರ ಗಾಯವಾದರೆ, ನೀರಿನಲ್ಲಿ ಮುಳುಗಿ ಪ್ರಾಣಾಪಾಯ ದಲ್ಲಿ ಇದ್ದರೆ, ಹಾಗೂ ಸಾಮನ್ಯ ಶಸ್ತ್ರ ಚಿಕಿತ್ಸೆಗಳಿಗೆ ಈ ವಿಮಾ ಯೋಜನೆಯ ಹಣವು ಬರುತ್ತದೆ.

ಇದನ್ನೂ ಓದಿ: ಕೈಗೆ ಸುತ್ತಿ ಮಡಚಬಹುದಾದಂತಹ ನೋಟವನ್ನು ಹೊಂದಿರುವ ಈ Motorola ಫೋನ್ನಲ್ಲಿ ಟ್ಯಾಬ್ಲೆಟ್ ಅನ್ನೂ ಕಾಣಬಹುದು