ಬಡವರ ಮತ್ತು ಮಧ್ಯಮ ವರ್ಗದ ಜನರ ಆರೋಗ್ಯದ ರಕ್ಷಣೆಗೆ ರಾಜ್ಯ ಸರಕಾರವು ಯಶಸ್ವಿನಿ ಯೋಜನೆಯಡಿ 5 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ ನೀಡುತ್ತಿದೆ. ರಾಜ್ಯದ ಜನರಿಗೆ ಕೆಲವು ಔಷಧಿಗಳು ಮತ್ತು ಕೆಲವು ಚಿಕಿತ್ಸೆಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಈಗಾಗಲೆ ಯಶಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ನೀವು ಸಹಾಯಧನ ಪಡೆಯಬಹುದು.
200ಕ್ಕೂ ಹೆಚ್ಚಿನ ದರವನ್ನು ಪರಿಷ್ಕರಿಸಿದ ರಾಜ್ಯ ಸರ್ಕಾರ:- ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಒಟ್ಟು 200 ವಿವಿಧ ರೀತಿಯ ಈಗ ಚಿಕಿತ್ಸೆಗೆ ದರ ನಿಗದಿ ಮಾಡಿದ್ದು. ಇದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಆಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಲಕ್ಷ ಲಕ್ಷ ರೂಪಾಯಿಗಳನ್ನು ನೀಡಬೇಕು. ಆದರೆ ಇದು ಮಾಧ್ಯಮ ಮತ್ತು ಬಡವರ ಪಾಲಿಗೆ ಕಾಟ ಆಗುತ್ತಿತ್ತು. ಇದನ್ನು ಅರಿತ ಸರಕಾರವು ಈ ವರ್ಷವೂ ಸಹ ರಾಜ್ಯದ ಜನರಿಗೆ ಈ ಯೋಜನೆಯ ಲಾಭವನ್ನು ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2,128 ಚಿಕಿತ್ಸಾ ವಿಧಾನಗಳು ಇವೆ :- ಯಶಸ್ವಿನಿ ಯೋಜನೆಯಡಿ ಒಟ್ಟು 2,128 ಚಿಕಿತ್ಸೆಗಳು ಲಭ್ಯ ಇದೆ. ಇದರಲ್ಲಿ ಒಟ್ಟು 208 ಚಿಕಿತ್ಸೆಗೆ ದರ ಪರಿಷ್ಕರಣೆ ಆಗಿದೆ.
ಈ ಹಿಂದೆ ಏಷ್ಟು ಚಿಕಿತ್ಸೆ ಗಳು ಲಭ್ಯ ಇವೆ.: ಯಶಸ್ವಿನಿ ಯೋಜನೆ ಅಡಿಯಲ್ಲಿ ಈ ಹಿಂದೆ 1,650 ಚಿಕಿತ್ಸೆಗೆ ಸಹಾಯಧನ ಸಿಗುತ್ತಿತ್ತು.
ಎಷ್ಟು ಆಸ್ಪತ್ರೆಗಳು ಯಶಸ್ವಿನಿ ಯೋಜನೆಯ ಮಾನ್ಯ ಮಾಡುತ್ತವೆ.:- ಎಲ್ಲಾ ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯನ್ನು ಮಾನ್ಯ ಮಾಡುವುದಿಲ್ಲ. ರಾಜ್ಯದಲ್ಲಿ ಒಟ್ಟು 673 ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿದೆ .ಇದರಲ್ಲಿ 605 ಖಾಸಗಿ ಆಸ್ಪತ್ರೆಗಳು ಇವೆ. ನೋಂದಣಿ ಮಾಡಿಸಿಕೊಂಡ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯಲ್ಲಿ ನಿಮಗೆ ಕಡಿಮೆ ದರ ಅಥವಾ ಉಚಿತ ಚಿಕಿತ್ಸೆ ಲಭ್ಯ ಇರುತ್ತದೆ.
5 ಲಕ್ಷ ರೂಪಾಯಿಯ ವರೆಗೆ ನಗದು ರಹಿತ ಚಿಕಿತ್ಸೆ ಲಭ್ಯ ಇರುತ್ತದೆ :- ಯಶಸ್ವಿನಿ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಖಾಸಗಿ ಮತ್ತು ಅರೇ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿಯ ವರೆಗೆ ನಗದು ರಹಿತ ಚಿಕಿತ್ಸೆ ಲಭ್ಯ ಇದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಕೇವಲ 500 ರೂ. ಹೂಡಿಕೆ ಮಾಡುವುದರ ಮೂಲಕ, ಉತ್ತಮ ಲಾಭ ಗಳಿಸಿ!
ಯಶಸ್ವಿನಿ ಯೋಜನೆಯ ಲಾಭಗಳು :-
- ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ :- ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆಪರೇಷನ್ ಅಥವಾ ಚಿಕಿತ್ಸೆಗಳು ಇವೆ. ಇದರಿಂದ ಹಣದ ಅಭಾವದಿಂದ ಜೀವ ಕಳೆದುಕೊಳ್ಳುವ ಸಂಭಾವ್ಯ ಕಡಿಮೆ ಆಗುತ್ತದೆ.
- ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳ ಲಭ್ಯತೆಯನ್ನು ಸುಧಾರಿಸುತ್ತದೆ: ಯಶಸ್ವಿನಿ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಗಣನೀಯವಾಗಿ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ. ಗ್ರಾಮಿಣ ಭಾಗದ ಜನರಿಗೆ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ್ಯುವುದರ ಮೂಲಕ ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ.
- ಕಡಿಮೆ ಆದಾಯದ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ಹೆಚ್ಚು ಒಳಗೊಳ್ಳುವಂತೆ ಮಾಡುತ್ತದೆ: ಈ ಯೋಜನೆಯಿಂದ ಕಡಿಮೆ ಆದಾಯದ ಕುಟುಂಬಗಳಿಗೆ ದುಬಾರಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.
- ಮಹಿಳೆಯರಿಗೆ ಮತ್ತು ಮಕ್ಕಳ ಆರೋಗ್ಯವನ್ನು ಉತ್ತೇಜಿಸುತ್ತದೆ: ಯಶಸ್ವಿನಿ ಯೋಜನೆಯು ಗರ್ಭಿಣಿ ಮಹಿಳೆಯರ ಆರೋಗ್ಯ ಹಾಗೂ ಮಕ್ಕಳಿಗೆ ವಿಶೇಷ ಲಾಭಗಳನ್ನು ನೀಡುವುದರ ಜೊತೆ ಜೊತೆಗೆ ಇದು ಅವರ ಆರೋಗ್ಯ ಮತ್ತು ಯೋಗ ಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹೋಮ್ ಲೋನ್ ಗೆ EMI ಕಟ್ಟುವ ಹೊರೆಯನ್ನು ಕಡಿಮೆ ಮಾಡುವ ಐದು ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.