ಯೂಟ್ಯೂಬ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಚಿಕ್ಕ ಚಿಕ್ಕ ವಿಷಯಗಳನ್ನು ತಿಳಿದುಕೊಳ್ಳಲು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ವಿಡಿಯೋ ನೋಡುವ ಸಾಕಷ್ಟು ಮಂದಿ ಇದ್ದಾರೆ. ಕೇವಲ ಯೂಟ್ಯೂಬ್ ನಿಂದ ವಿಡಿಯೋ ನೋಡಿ ಮನರಂಜನೆ ಪಡೆಯುವವರು ಇದ್ದಾರೆ ಆದರೆ ವಿಡಿಯೋಗಳನ್ನು ನೋಡಿ ಇತರ ವಿಡಿಯೋ ನಾವು ಮಾಡಬಹುದಲ್ವಾ ಎಂದು ಎಷ್ಟೋ ಜನ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಮಾಡುತ್ತಾ ಅದರಲ್ಲಿ ಜೀವನ ಕಟ್ಟಿ ಕೊಂಡುವವರ ಸಾಕಷ್ಟು ಉದಾಹರಣೆ ಇದೆ. 2020 ಲಾಕ್ ಡೌನ್ ಆದ ನಂತರ ಯೂಟ್ಯೂಬ್ ಟ್ರೆಂಡ್ ತುಂಬಾ ಆಯ್ತು. ಆಗ ಮನೆಯಲ್ಲಿ ಇದ್ದ ಜನ ಟಿವಿ ನೋಡುವ ಬದಲು ಎಲ್ಲಾ ಯೂಟ್ಯೂಬ್ ನಲ್ಲಿ ವಿಡಿಯೋ ನೋಡಲು ಶುರು ಮಾಡಿದರು.
ಅದರಲ್ಲಿ ಕೆಲವರು ಯೂಟ್ಯೂಬ್ ನಿಂದಲ್ಲೂ ಹಣ ಸಂಪಾದನೆ ಮಾಡಬಹುದೆಂದು ತಿಳಿದು ಅವರು ಕೂಡ ವಿಡಿಯೋ ಮಾಡಲು ಶುರು ಮಾಡಿದರು ಅದರಲ್ಲಿ ಕೆಲವರು ಯಶಸ್ವಿಯಾದರೆ ಇನ್ನಷ್ಟು ಜನ ಯೂಟ್ಯೂಬ್ ನ ಮಾನದಂಡಗಳನ್ನು ಪೂರ್ಣಗೊಳಿಸಲಾಗದೆ ಅರ್ಧಕ್ಕೆ ಕೈ ಬಿಟ್ಟರು. ಇದೀಗ ಅಂತವರಿಗೆಲ್ಲ ಮತ್ತು ಹೊಸ ಯೂಟ್ಯೂಬ್ ಕ್ರಿಯೇಟರ್ ಗಳಿಗೆ ಯೂಟ್ಯೂಬ್ ನಿಂದ ಹೊಸ ಮಾನಿಟೈಜೇಷನ್(Monitization) ರೂಲ್ಸ್ ಬಂದಿದ್ದು ಈಗ ಯೂಟ್ಯೂಬ್ ನಿಂದ ಹಣ ಸಂಪಾದನೆ ಮಾಡಲು ಸುಲಭ ಮಾರ್ಗವನ್ನು ಯೂಟ್ಯೂಬ್ ತಂದಿದೆ.
ಯೂಟ್ಯೂಬ್ ನಿಂದ ಹಣಗಳಿಕೆ ಮಾಡಲು ಹೊಸ ಕಂಡೀಷನ್ಸ್
ಮೊದಲು | ಈಗ |
1,000 Subscribers | 500 Subscribers |
4,000 Watch hours | 3,000 Watch hours |
ಇನ್ನೂ 3,000 Watch Hours ಅನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸ ಬೇಕು. ಇದರ ಜೊತೆ ಯೂಟ್ಯೂಬ್ ನಲ್ಲಿ ಶಾರ್ಟ್ಸ್(Shorts) ವಿಡಿಯೋ ಮಾಡುವವರೆಗೂ ಕೂಡ ಗುಡ್ ನ್ಯೂಸ್ ಬಂದಿದ್ದು ಮೊದಲಿಗೆ 10 ಮಿಲಿಯನ್ ಶಾರ್ಟ್ಸ್(Shorts) Views ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕಿತ್ತು, ಆದರೆ ಈಗ ಕೇವಲ ಮೂರು ಮಿಲಿಯನ್ ಶಾರ್ಟ್ಸ್(Shorts) views ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಜೊತೆಗೆ 500 ಸಬ್ಸ್ಕ್ರೈಬ್ ಇದ್ದರೆ ಶಾರ್ಟ್ಸ್ ನಿಂದ ಕೂಡ ಹಣ ಗಳಿಸಬಹುದಾಗಿದೆ.
ಇನ್ನು ಇಷ್ಟೆಲ್ಲ ಕಂಡಿಷನ್ಸ್ ಗಳನ್ನು ಪೂರ್ಣಗೊಳಿಸಿದ ಬಳಿಕ ನೀವು ಮಾನಿಟೈಜೇಷನ್(Monitization) ಗೆ ಅಪ್ಲೈ ಮಾಡಬಹುದು. ಇದರ ಜೊತೆ ಯೂಟ್ಯೂಬ್ ಹೊಸ ಫ್ಯೂಚರ್ ಗಳನ್ನು ಕೊಡುತ್ತಿದ್ದು ಇದರ ಮೂಲಕ ಕೂಡ ಹಣ ಸಂಪಾದನೆ ಮಾಡಬಹುದು. ಒಟ್ಟಿನಲ್ಲಿ ಯಾರಿಗೆಲ್ಲ ಆಸಕ್ತಿ ಮತ್ತು ಪಾರ್ಟ್ ಟೈಮ್ ಕೆಲಸದ ಮೂಲಕ ಯೌಟ್ಯೂಬ್ ಚಾನೆಲ್ ಶುರು ಮಾಡುವವರಿಗೆ ಇದು ಒಳ್ಳೆಯ ಸಮಯವಾಗಿದೆ.
ಇದನ್ನೂ ಓದಿ: ಗಟ್ಟಿಮೇಳ ವಿಕ್ಕಿ ಪಾತ್ರ ಅಂತ್ಯ! ಕೊನೆಯ ದಿನದ ಶೂಟಿಂಗ್ ಸೆಟ್ ನಲ್ಲಿ ಕಣ್ಣೀರಿಟ್ಟ ವಿಕ್ರಾಂತ್ ಪಾತ್ರಧಾರಿ
ಇದನ್ನೂ ಓದಿ: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಟ ಪ್ರಥಮ್.. ಹುಡುಗಿ ಯಾರು ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram