Chandan Gowda Engagement: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್..

Chandan Gowda Engagement: ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ರಾಜ್ಯ ವಿಧಾನಸಭಾ ಚನಾವಣೆಯಲ್ಲಿ ಕೇವಲ 28 ವರ್ಷಕ್ಕೆ ಯೂಟ್ಯೂಬರ್ ಒಬ್ಬ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತರು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರೂ. ಹೌದು ಕೆ. ಆರ್ ಪೇಟೆ ವಿಧಾನಸಭಾ ವಿಚಾರವಾಗಿ ಸಾಕಷ್ಟು ಕುತೂಹಲವಿತ್ತು. ಹೌದು 28ವರ್ಷದ ಯೂಟ್ಯೂಬರ್ ಚಂದನ್, ಕೆ. ಆರ್ ಪೇಟೆ ಕ್ಷೇತ್ರ ದಿಂದ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದರ ಜೊತೆಗೆ ಅಗ್ರಿಮೆಂಟ್ ಕೊಟ್ಟು ಮತ ಕೇಳುವ ಮೂಲಕ ಇಡಿ ಕರ್ನಾಟಕದ ಜನರ ಗಮನ ಸೆಳೆದಿದ್ರು. ಇದೀಗ ವಿಧಾನಸಭ ಚನಾವಣೆಯು ಮುಗಿದಿದ್ದು, ಫಲಿತಾಂಶ ಕೂಡ ಹೊರಬಂದಿದ್ದು, ಯೂಟ್ಯೂಬರ್ ಚಂದನ್ ಅಲ್ಪ ಮತಗಳಿಗೆ ತೃಪ್ತಿ ಪಟ್ಟುಕೊಂಡರು.

WhatsApp Group Join Now
Telegram Group Join Now

ಆದ್ರೆ ಇದು ಹಳೆ ವಿಚಾರ ಆದ್ರೆ ಇದೀಗ ಯೂಟ್ಯೂಬರ್ ಚಂದನ್ ಗೌಡ ಕುರಿತಾದ ಹೊಸ ಸುದ್ದಿಯೊಂದು ಸಾಕಷ್ಟು ವೈರಲ್. ಆಗ್ತಿದೆ. ಹೌದು ಚಂದನ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದು ಖ್ಯಾತ ಕಿರುತೆರೆ ನಟಿಯೊಂದಿಗೆ ಇದೀಗ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚುನಾವಭೆಯಲ್ಲಿ ಸೋತ ಬಳಿಕ ಮಾತಾನಾಡಿದ್ದ ಚಂದನ್ ನಾನು ನಿಮ್ಮ ಜೊತೆಗೆ ಕ್ಷೇತ್ರದಲ್ಲಿಯೇ ಇರುತ್ತೇನೆ, ನಿಮ್ಮ ಮಧ್ಯೆಯು ಇದ್ದು ಕೆಲಸ ಮಾಡ್ತಾನೆ ಅಂತ ಹೇಳಿದ್ರು ಆದ್ರೆ ಅದಾದ ನಂತರ ಚಂದನ್ ಅವ್ರು ಯಾವುದರ ಬಗ್ಗೆಯೂ ಮಾತನಾಡಿರಲಿಲ್ಲ, ಜನ ಕೂಡ ಈ ಬಗ್ಗೆ ಮಾತನಾಡದೆ ಸುಮ್ಮನಾಗಿದ್ರು. ಆದ್ರೆ ಇದೀಗ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಖ್ಯಾತ ಕಿರುತೆರೆ ನಟಿಯೊಂದಿಗೆ ಚಂದನ್ ಎಂಗೇಜ್ಮೆಂಟ್ ಮಾಡಿಕೊಂಡಿರೋದು.

ಇದನ್ನೂ ಓದಿ: ದುಬೈನಲ್ಲಿ ಡಾ. ಬ್ರೋ ಜೊತೆ ಕನ್ನಡದ ನಟರು. ಅಚಾನಕ್ಕಾಗಿ ಎಲ್ಲರನ್ನು ಒಟ್ಟಿಗೆ ನೋಡಿ ಸೈಕಾದೆ

ಗೌರಿಪುರದ ಗಯ್ಯಾಳಿಗಳು ಖ್ಯಾತಿಯ ನವ್ಯ ಜೊತೆ ಎಂಗೇಜ್ ಆದ ಚಂದನ್

ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಯೌಟ್ಯೂಬರ್ ಚಂದನ್ ಗೌಡ ಅತೀ ಚಿಕ್ಕ ವಯಸ್ಸಿಗೆ ಯಾರ ಸಪೋರ್ಟ್ ಇಲ್ಲದೆ ಕರ್ನಾಟಕದಲ್ಲಿ ಚುನಾವಣೆಯಲ್ಲಿ ಹೊಸ ಅಲೆ ಸೃಷ್ಟಿಸಿದ್ರು. ಅನಂತರ ಎಷ್ಟೋ ಹೃದಯಗಳನ್ನ ಗೆದ್ದು ಅವ್ರ ಮನೆ ಮಗನೆ ಆದ್ರೂ. ಇದೀಗ ಚಂದನ್ ಖ್ಯಾತ ಕಿರುತೆರೆ ನಟಿಯೊಂದಿಗೆ ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಹೌದು ಉದಯ ಟಿವಿ ವೀಕ್ಷಕರಿಗೆ ಈ ನಟಿ ಚಿರ ಪರಿಚಿತರು. ಗೌರಿ ಪುರದ ಗಯ್ಯಾಳಿಗಳು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದ ನಟಿ ನವ್ಯ ನಾರಾಯಣ್ ಗೌಡ ಜೊತೆಗೆ ಚಂದನ್ ಎಂಗೇಜ್ ಆಗಿದ್ದಾರೆ. ನವ್ಯ ಗೌಡ ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟಿ, ಸಾಕಷ್ಟು ಧಾರವಾಹಿಗಳಿಗೆ ಬಣ್ಣ ಹಚ್ಚಿರುವ ನವ್ಯ ಇದೀಗ ಯೌಟ್ಯೂಬರ್ ಚಂದನ್ ಗೌಡ ಅವ್ರ ಮನದರಸಿಯಾಗಿದ್ದು, ಇವರಿಬ್ಬರ ಎಂಗೇಜ್ಮೆಂಟ್ ಫೋಟೋಗಳು ಸಖತ್ ವೈರಲ್ ಆಗಿವೆ.

ಹೌದು ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿರುವ ಈ ಜೋಡಿಯ ನಿಶ್ಚಿತಾರ್ಥ ಫೋಟೋಗಳು ಎಲ್ಲ ಕಡೆ ವೈರಲ್ ಆಗ್ತಿದೆ. ಆದ್ರೆ ಎಲ್ಲಿಯೂ ಕೂಡ ಇಬ್ಬರು ಗುಟ್ಟನ್ನ ಬಿಟ್ಟುಕೊಟ್ಟಿಲ್ಲ. ಚಂದನ್ ಸಹ ತಮ್ಮ ಯೌಟ್ಯೂಬ್ ಖಾತೆಯಲ್ಲಿ ತಮ್ಮ ಎಂಗೇಜ್ಮೆಂಟ್ ವಿಚಾರವನ್ನ ಹಂಚಿಕೊಂಡಿಲ್ಲ, ನವ್ಯ ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಖಾತೆಯಲ್ಲಿಯೂ ಈ ವಿಚಾರವನ್ನ ಅಧಿಕೃತವಾಗಿ ಹೇಳಿಲ್ಲ. ಆದರೂ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ಸಖತ್ ವೈರಲ್ ಆಗಿದ್ದು, ಗುರುಹಿರಿಯರ ಸಮ್ಮುಖದಲ್ಲಿ ಬಹಳ ಸರಳವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇದು ಮನೆಯವರು ಹುಡುಕಿ ಮಾಡಿರುವ ನಿಶಿತಾರ್ಥವೊ ಅಥವಾ ಇವರಿಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮಾಡಿಕೊಂಡಿರುವ ನಿಶ್ಚಿತಾರ್ಥವೊ ಇನ್ನು ಬಹಿರಂಗವಾಗಿಲ್ಲ. ಇದೆಲ್ಲದಕ್ಕೂ ಉತ್ತರ ಚಂದನ್ ಅಥವಾ ನವ್ಯ ಹೇಳಿಕೊಂಡಾಗಲೇ ಗೊತ್ತಾಗಲಿದೆ.

ಇದನ್ನೂ ಓದಿ: ಗೆಳೆಯನ ಬರ್ತಡೇಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಧ್ರುವ ಸರ್ಜಾ..

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram