Nikhil Nisha: ಸ್ನೇಹಿತರೆ ನಿಖಿಲ್ ನಿಶಾ ರೀಲ್ಸ್ ನಲ್ಲಿ ಸಾಕಷ್ಟು ಅಂದಾಭಿಮಾನಿಗಳನ್ನ ಹೊಂದಿರೋ ಈ ನಿಖಿಲ್ ಮೊನ್ನೆ ಮಾಡಿಕೊಂಡಿದ್ದ ಅವಾಂತಾರ ಆತ ಬಳಸಿದ್ದ ಸುಸಂಸ್ಕೃತ ಪದಗಳ ವಿಡಿಯೋ ಸಖತ್ ವೈರಲ್ ಆಗಿತ್ತು, ಎಣ್ಣೆ ಮತ್ತಲ್ಲಿ ಮಾಡಿದ್ದು ಆದ್ರೂ ತಾನು ತಪ್ಪು ಮಾಡಿಲ್ಲ ಅಂತ ಫುಲ್ ಬಿಲ್ಡಪ್ ತಗೊಂಡು ಕ್ಲಾರಿಟಿ ವಿಡಿಯೋ ಮಾಡಿದ್ದಾನೆ. ಹೌದು ಮೊದಲಿಗೆ ನಿಖಿಲ್,ಫ್ರೆಂಡ್ಸ್ ಜೊತೆ ಯಾವುದು ಒಂದು ರೆಸ್ಟೋರೆಂಟ್ ಗೆ ಹೋಗಿರುತ್ತಾನೆ. ಆ ಸಂದರ್ಭದಲ್ಲಿ ನಿಖಿಲ್ ಜಗಳ ಮಾಡಿಕೊಂಡು ಅವರ ಮೇಲೆ ಕೈ ಮಾಡುತ್ತಾನೆ ಅದಾದ ನಂತರ ಪೊಲೀಸರು ಸ್ಥಳಕ್ಕೆ ಬಂದು ನಿಖಿಲ್ ನ್ನು ಅಲ್ಲಿಂದ ಜೀಪಲ್ಲಿ ಕೂರಿಸೋ ಪ್ರಯತ್ನ ಮಾಡ್ತಾರೆ. ಆಗ ನಿಖಿಲ್ ಹೊರಗಡೆ ಬರುವಂತಹ ಪ್ರಯತ್ನ ಮಾಡ್ತಿರ್ತಾರೆ ಆಗ ಕೆಲವೊಂದಷ್ಟು ಜನ ಡೋರ್ ಓಪನ್ ಮಾಡಿ ಅಂತ ಹೇಳಿದ್ರೆ, ಮತ್ತೊಂದಷ್ಟು ಜನ ಸುಮ್ನೆ ಇರು ಗುರು ಪೊಲೀಸ್ ನವರಿಗೆ ಹೊಡೆದಿದ್ದಾನೆ ಸುಮ್ನೆ ಬಿಟ್ಟುಬಿಡುತ್ತಾರೆ ಅಂತ ಕೇಳುತ್ತಾರೆ ಹಾಗಾದ್ರೆ ನಿಜಕ್ಕೂ ಪೊಲೀಸ್ ನವರಿಗೆ ನಿಖಿಲ್ ಹೊಡುದ್ರ ಅನ್ನುವಂತಹ ಪ್ರಶ್ನೆಗಳು ಇದ್ವು.
ಅಲ್ಲದೇ ರೆಸ್ಟೋರೆಂಟ್ ನಲ್ಲಿ ಆಗಿದ್ದೇನು ಅನ್ನೋ ಪ್ರಶ್ನೆಗಳ ಜೊತೆಗೆ ನಿಖಿಲ್ ನ ಕೆಲ ಅಪ್ಪಟ ಕಣ್ಣು ಕಾಣದ ಅಭಿಮಾನಿಗಳು ಕ್ಲಾರಿಟಿ ಕೊಡಿ ಅಣ್ಣಾ ಅಂತ ಪಾಪ ಬೇಡಿಕೊಂಡಿದ್ರು. ಆಗ ಈ ನಿಖಿಲ್ ಕೂಡ ತನ್ನದೇನು ತಪ್ಪಿಲ್ಲ ಫುಲ್ ಎಣ್ಣೆ ಹೊಡೆದು ಟೈಟ್ ಆಗಿದ್ವ, ನಾವು ವೆಜ್ ಆರ್ಡರ್ ಮಾಡಿದ್ರೆ ನನ್ ವೆಜ್ ಕೊಟ್ರು ಎಷ್ಟೇ ಕೇಳುದ್ರೂ ರೆಸ್ಪಾನ್ಸ್ ಮಾಡಲಿಲ್ಲ ಅದಿಕ್ಕೆ ಬಾಟೆಲ್ ಬಿಸಾಕ್ದ ನನ್ ಪ್ರೆಂಡ್ ಅದು ಕ್ಲೀನರ್ ಅಂಕಲ್ ಕಾಲಿಗೆ ಬಿತ್ತು ಆದ್ರೆ ಅವರಿಗೇನು ಆಗಿಲ್ಲ ನಾನು ಆದ್ರೂ ದುಡ್ಡು ಕೊಟ್ಟೆ. ಆಗ ಪಕ್ಕದ ಟೇಬಲ್ ನಲ್ಲಿ ಇದ್ದೋರು ಜಗಳ ಶುರು ಮಾಡುದ್ರು ಅದು ಪೋಲಿಸ್ ವರೆಗೂ ಹೋಗಿ ಅಲ್ಲಿ ಲೆಟರ್ ಬರೆಸಿಕೊಂಡು ಕಳಿಸಿಕೊಟ್ರು ಅಂತ ಬಹಳ ನಾಜುಕಾಗಿ ಮಾತಾಡಿ ಸತ್ಯವಣ್ಣ ಅಲ್ಲೇ ಸಮಾಧಿ ಮಾಡಿದ್ದಾನೆ. ಅದನ್ನ ನಿಖಿಲ್ ಅಭಿಮಾನಿ ದೇವರುಗಳು ಕೂಡ ನಂಬಿಕೊಂಡಿದ್ದಾರೆ.
ಇದನ್ನೂ ಓದಿ: ಬಸ್ ನಲ್ಲೇ ಒಡೆದಾಡಿಕೊಂಡ ಮಹಿಳೆಯರು, ಮೈಸೂರು ಬಸ್ ನಲ್ಲಿ ಮಹಿಳೆಯರ ಅತಿರೇಕದ ವರ್ತನೆ
CCTV ಯಲ್ಲಿ ಸಿಕ್ತು ನಿಜವಾದ ಸತ್ಯ
ಆದರೆ ರೀಲ್ಸ್ ಸ್ಟಾರ್ ಮಿಸ್ಟರ್ ನಿಖಿಲ್ ಅವ್ರು ಕಟ್ಟಿರುವ ಕಥೆ ಕಟ್ಟು ಕಥೆ ಅನ್ನೋದು ಈಗ ರಿಲೀಸ್ ಆಗಿರೋ ಸಿಸಿಟಿವಿ ಫುಟೆಜಸ್ ನಿಂದ ಕ್ಲಿಯರ್ ಆಗಿ ಗೊತ್ತಾಗಿದೆ. ಈ ದೊಡ್ಡ ಮನುಷ್ಯ ಹೇಳಿದ್ದು ಒಂದು ಕೂಡ ಅಲ್ಲಿ ನಡೆದಿಲ್ಲ. ಅಸಲಿಗೆ ರೆಸ್ಟೋರೆಂಟ್ ಗೆ ಹೋಗಿ ಫುಲ್ ಎಣ್ಣೆ ಹೊಡ್ದು ಪಾರ್ಟಿ ಮಾಡಿ ನಾನ್ ವೆಜ್ ಆರ್ಡರ್ ಮಾಡಿ ಸರಿಯಾಗೇ ತಿಂದಿದ್ದಾರೆ. ಆಮೇಲೆ ನಾನ್ ವೆಜ್ ಫೀಸ್ ಗಳನ್ನ ವೆಜ್ ಬಿರಿಯಾನಿಗೆ ಸೇರಿಸಿ ದಂಧಲೇ ಶುರು ಮಾಡಿ ಬಾಟಲ್ ಹೊಡೆಯೋಕೆ ಶುರು ಮಾಡಿದ್ದಾರೆ ಆದರೂ ಕೂಡ ರೆಸ್ಟೋರೆಂಟ್ ಸಿಬ್ಬಂದಿಗಳು ಸುಮ್ಮನೆ ಎಲ್ಲವನ್ನ ಕ್ಲಿನ್ ಮಾಡ್ತಿರ್ತಾರೆ ಆಗ ಸ್ವತಃ ನಿಖಿಲ್ ಕೂಡ ಬಾಟೆಲ್ ಒಂದನ್ನ ಹೊಡೀತಾನೆ. ನಂತರ ಸಿಬ್ಬಂದಿ ಗಳಿಗೆ ಗಾಜಿನ ಚೂರು ಚುಚ್ಚಿ ರಕ್ತ ಬರುತ್ತೆ ಆಗ ವಾಚ್ ಮೆನ್ ಬರ್ತಾರೆ ಅವ್ರನ್ನ ಅಲ್ಲಿಯೇ ತಡೆದು ಎಲ್ಲೋ ಮಿಸ್ ಹೊಡಿತಿದೆ ಅಂತ ಗಾಯವಾದ ವ್ಯಕ್ತಿಗೆ ದುಡ್ಡು ಕೊಡ್ತಾನೆ ನಿಖಿಲ್. ಆಗ ಪಕ್ಕದ ಟೇಬಲ್ ಅವ್ರು ಯಾಕೆ ಗಲಾಟೆ ಮಾಡ್ಕೋತೀರಾ ಬೇಡ ಅಂದಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಅವ್ರಿಗೂ ಹೊಡೆದಿದ್ದಾನೆ. ನಂತರ ರೆಸ್ಟೋರೆಂಟ್ ಮಾಲೀಕ ಪೊಲೀಸ್ ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೋಲೀಸರ ಮೇಲೆ ಕೈ ಮಾಡಿದ್ರೆ ಅವ್ರು ಸುಮ್ಮನೆ ಬಿಡ್ತಾರೆ ಅದಿಕ್ಕೆ ಜಿಪ್ ನಲ್ಲಿ ಎತ್ತಾಕೊಂಡು ಹೋಗಿ ಬೆಂಡ್ ಎತ್ತಿ ಬಿಸಿ ಮುಟ್ಟಿಸಿ ಆಪೋಲಾಜಿ ಬರೆಸಿಕೊಂಡು ಕಳಿಸಿದ್ದಾರೆ.
ಇಷ್ಟೆಲ್ಲ ಮಾಡಿದ್ರು ಏನು ಮಾಡಿಲ್ಲ ನಂದೇನು ತಪ್ಪಿಲ್ಲ ಅಂತ ನಿಖಿಲ್ ಕೊಡೊ ಬಿಲ್ಡಪ್ ಗೆ ಮಧು ಬೇರೆ ಸಾಥ್ ಕೊಟ್ಟಿದ್ದು. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಅಂತ ಟ್ರೋಲ್ ಫೇಜ್ ನ ಲ್ಲಿ ಸರಿಯಾಗಿ ಬೆಂಡ್ ಎತ್ತುತ್ತಿದ್ದಾರೆ. ಅಲ್ಲದೇ ಕನಿಷ್ಠ ಪಕ್ಷ ತಪ್ಪಿನ ಅರಿವು ಆಗ್ತಿಲ್ಲ ಇವನಿಗೆ, ಇವ್ನನ್ನ ನಂಬಿರೋರಿಗೂ ಸುಳ್ಳು ಹೇಳಿ ಕಥೆ ಕಟ್ಟುತ್ತಿದ್ದಾನೆ ಅಂತ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೆಸರು ಹಾಳು ಮಾಡೋಕೆ ವಿಡಿಯೋ ಮಾಡಿರೋದು ನಿಜಾನೆ ಇರಬಹುದು ಆದ್ರೆ ಸಿಸಿಟಿವಿ ದೃಶ್ಯಗಳು ಸುಳ್ಳು ಹೇಳುತ್ತಾ ಅನ್ನೋದು ಈಗ ಎದ್ದಿರುವಂತಹ ಪ್ರಶ್ನೆ. ಆದ್ರೂ ಕೂಡ ನಿಖಿಲ್ ನ ಕುರುಡು ಅಭಿಮಾನಿಗಳ ಕಣ್ಣಿಗೆ ಕಾಣಿಸುತ್ತಿಲ್ಲ ಅನ್ನೋದು ಬೇಜಾರಿನ ವಿಚಾರ ಅನ್ನೋದು ಟ್ರೊಲರ್ ಗಳ ಮಾತು.
ಇದನ್ನೂ ಓದಿ: ನಂಬಿದವರಿಂದಲೇ ರಶ್ಮಿಕಾ ಮಂದಣ್ಣನಿಗೆ ಲಕ್ಷ ಲಕ್ಷ ಪಂಗನಾಮ!! ಇನ್ನು ಆಗಬೇಕಿತ್ತು ಇಂಥವರಿಗೆ ಅಂತ ಒಂದಷ್ಟು ಜನ ಶಾಪ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram