ಪ್ರತಿ ತಿಂಗಳ ಯುವನಿಧಿ ಹಣ ಪಡೆಯಲು ಈ ಕೆಲಸ ಕಡ್ಡಾಯವಾಗಿ ಮಾಡಬೇಕು.

Yuva Nidhi Scheme

ರಾಜ್ಯ ಸರ್ಕಾರವು ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡುತ್ತಿದೆ. ಈಗಾಗಲೇ ನಿರುದ್ಯೋಗಿಗಳಿಗೆ ಧನ ಸಹಾಯ ನೀಡುವ ಯುವನಿಧಿ ಯೋಜನೆಯು(Yuva Nidhi Scheme) ಅನುಷ್ಠಾನಕ್ಕೆ ಬಂದಿದೆ. ಯುವನಿಧಿ ಯೋಜನೆಯ ನಿಯಮದ ಪ್ರಕಾರ ಪ್ರತಿ ತಿಂಗಳು ನಿರುದ್ಯೋಗಿಗಳು ತಾವು ಯಾವುದೇ ಕೆಲಸ ಮಾಡುತ್ತಿಲ್ಲ ಅಥವಾ ಉನ್ನತ ಶಿಕ್ಷಣಕ್ಕೆ ಜಾಯಿನ್ ಆಗಿಲ್ಲ ಎಂಬ ಮಾಹಿತಿಯ ಪತ್ರವನ್ನು ಆನ್ಲೈನ್ ಮೂಲಕ ನೀಡಬೇಕು. ಅದರ ವಿಷಯವಾಗಿ ಈಗ ಕರ್ನಾಟಕ ರಾಜ್ಯ ಸರ್ಕಾರವು ಮತ್ತೆ ಅಧಿಸೂಚನೆ ಹೊರಡಿಸಿದೆ.

WhatsApp Group Join Now
Telegram Group Join Now

ರಾಜ್ಯ ಸರ್ಕಾರದ ಅಧಿಸೂಚನೆ ಏನು?: ಈಗಾಗಲೇ ಸೇವಾಸಿಂಧು ಪೋರ್ಟಲ್‌ ಮೂಲಕ ನಿರುದ್ಯೋಗಿ ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಮತ್ತು ಡಿಪ್ಲೋಮಾದಾರರು ಯುವನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಎಲ್ಲ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಜನವರಿ 2024 ರಲ್ಲಿ ನೇರ ನಗದು ವರ್ಗಾವಣೆ ಮಾಡಿದ್ದೇವೆ. ಫೆಬ್ರವರಿ 2024 ರ ಯುವನಿಧಿ ಯೋಜನೆಯ(Yuva Nidhi Scheme) ಫಲಾನುಭವಿಗಳು 29 ಫೆಬ್ರುವರಿ 2024 ರ ಒಳಗೆ ತಾನು ನಿರುದ್ಯೋಗಿ ಎಂಬುದಾಗಿ ಸ್ವಯಂ ಘೋಷಣೆ ಪತ್ರವನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಬೇಕು. ನಿಗದಿತ ಸಮಯದ ಒಳಗೆ ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸದೆ ಇದ್ದರೆ ಯುವನಿಧಿ ಯೋಜನೆಯ ನಿಮ್ಮ ಅರ್ಜಿಯನ್ನು ವಜಾ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿರುದ್ಯೋಗಿ ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸುವುದು ಹೇಗೆ?: ನಿರುದ್ಯೋಗಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನ್ ಪೋರ್ಟಲ್ ನಲ್ಲಿ ನಿರುದ್ಯೋಗಿ ಸ್ವಯಂ ಘೋಷಣೆ ಫಾರ್ಮ್ ಸಿಗುತ್ತದೆ ಅದನ್ನು ಭರ್ತಿ ಮಾಡಿ ನಿಮ್ಮ ಆಧಾರ್ ಸಂಖ್ಯೆ ಮತ್ತು ನಿಮ್ಮ ಮೊಬೈಲ್ ನಂಬರ್ ಗೆ ಬಂದಿರುವ OTP ನಮೂದಿಸಿ ಅರ್ಜಿ ಸಲ್ಲಿಸಬಹುದು. ನಂತರ ನಿಮ್ಮ ಅರ್ಜಿಯನ್ನು ಇಲಾಖೆಯು ಪರಿಶೀಲನೆ ಮಾಡಿ ನಿಮ್ಮ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ: PPF ಸ್ಕೀಮ್: ಮಾಸಿಕ ರೂ 5,000 ಠೇವಣಿ, ರೂ 42 ಲಕ್ಷ ಲಾಭ! ಸ್ಕೀಮ್ ನ ಪೂರ್ತಿ ವಿವರಗಳು

ಯುವನಿಧಿ ಯೋಜನೆಯ ಪ್ರಯೋಜನಗಳು ಏನು?

  • ಉದ್ಯೋಗ ದೊರೆಯುವ ವರೆಗೆ ಪದವಿಧರರಿಗೆ ₹3,000 ಮತ್ತು ಡಿಪ್ಲೊಮಾ ಹೊಂದಿರುವವರಿಗೆ ₹1,500 ಮಾಸಿಕ ನಿರುದ್ಯೋಗ ಭತ್ಯೆ ಸಿಗುತ್ತದೆ.
  • ಯುವನಿಧಿ ಯೋಜನೆಯು ಕರ್ನಾಟಕದ ನಿರುದ್ಯೋಗಿ ಯುವಜನರಿಗೆ ಉತ್ತಮ ಯೋಜನೆಯಾಗಿದ್ದು ಈ ಯೋಜನೆಯು ಯುವಜನರಿಗೆ ಆರ್ಥಿಕ ನೆರವು ನೀಡುವುದು ಮಾತ್ರವಲ್ಲದೆ ಉದ್ಯೋಗ ಪಡೆಯಲು ಅವರಿಗೆ ಅಗತ್ಯವಿರುವ ಕೌಶಲ್ಯಗಳನ್ನು ಪಡೆಯಬಹುದು.
  • ನಿರುದ್ಯೋಗಿಗಳಿಗೆ ಕೆಲಸ ಸಿಗುವ ವರೆಗೆ ಅಥವಾ ಎರಡು ವರ್ಷಗಳ ವರೆಗೆ ಈ ಯೋಜನೆಯ ಹಣವೂ ಸಿಗಲಿದೆ.
  • ಈ ಹಣದಿಂದ ಯುವಕರ ದಿನನಿತ್ಯದ ಓಡಾಟದ ಖರ್ಚು ಹಾಗೂ ವಸತಿಗೆ ಅಲ್ಪ ಹಣ ಸಿಗುವಂತೆ ಆಗುತ್ತದೆ.
  • ನಿರುದ್ಯೋಗಿಗಳ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವ ಮೂಲಕ ಯುವಕರಲ್ಲಿ ಅವರ ಬಗ್ಗೆ ನಂಬಿಕೆ ಬರಲು ಸಹಾಯ ಆಗುತ್ತದೆ.

ಯುವನಿಧಿ ಯೋಜನೆಗೆ ಅರ್ಹತೆಗಳು ಏನು?

  • ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಕರ್ನಾಟಕದ ಮೂಲ ನಿವಾಸಿ ಆಗಿರಬೇಕು.
  • 2022-23 ರಲ್ಲಿ ಪದವಿ ಅಥವಾ ಡಿಪ್ಲೊಮಾ ಪಾಸ್ ಅದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿ ಆರು ತಿಂಗಳ ನಂತರ ಉದ್ಯೋಗ ದೊರೆಯದೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು.
  • ಯಾವುದೇ ಉದ್ಯೋಗ ಅಥವಾ ಬ್ಯುಸಿನೆಸ್ ಮಾಡುತ್ತಿರಬಾರದು.
  • ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರಬೇಕು.
  • ಶೈಕ್ಷಣಿಕ ಅರ್ಹತೆಯ ದಾಖಲಾತಿಯನ್ನು ನೀಡಬೇಕು.

ಇದನ್ನೂ ಓದಿ: 2500 ಬಿಎಂಟಿಸಿ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಪ್ರಕಟ