ಯುವನಿಧಿ ಹಣ ಬರಬೇಕು ಅಂದ್ರೆ ಪ್ರತಿ ತಿಂಗಳು ಸ್ವಯಂ ಘೋಷಿತ ನಿರುದ್ಯೋಗಿ ಪ್ರಮಾಣ ಪತ್ರ ನೀಡಲೇಬೇಕು

Yuva Nidhi Scheme

ಯುವನಿಧಿ ಯೋಜನೆಯು(Yuva Nidhi Scheme) ಕರ್ನಾಟಕ ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕರಿಗೆ ಸಹಾಯಧನ ನೀಡುವ ಯೋಜನೆ ಆಗಿದೆ. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಯ ಈಗಾಗಲೇ ಜಾರಿಯಲ್ಲಿ ಇದ್ದು. ಹಲವಾರು ಫಲಾನುಭವಿಗಳು ಈಗಾಗಲೇ ಯುವನಿಧಿ ಯೋಜನೆಯ ಹಣವನ್ನು ಪಡೆದಿದ್ದಾರೆ..

WhatsApp Group Join Now
Telegram Group Join Now

ಸ್ವಯಂ ಘೋಷಿತ ನಿರುದ್ಯೋಗಿ ಪ್ರಮಾಣ ಪತ್ರ ಏಕೆ ಸಲ್ಲಿಸಬೇಕು?

ಸ್ವಯಂ ಘೋಷಿತ ನಿರುದ್ಯೋಗಿ ಪ್ರಮಾಣ ಪತ್ರ ಎಂದರೆ ಯುವನಿಧಿ ಯೋಜನೆಯಲ್ಲಿ(Yuva Nidhi Scheme) ಪದವಿ ಅಥವಾ ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳು ಎಲ್ಲಿಯೂ ಉದ್ಯೋಗ ದೊರಕದೆ ಇದ್ದಲ್ಲಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ತಾನು ನಿರುದ್ಯೋಗಿ ಯಾವುದೇ ಬ್ಯುಸಿನೆಸ್ ಅಥವಾ ಯಾವುದೇ ಕೂಲಿ ಕೆಲಸ ಅಥವಾ ಯಾವುದೇ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ ಅಥವಾ ಉನ್ನತ ವ್ಯಾಸಂಗ ಮಾಡುತ್ತಿಲ್ಲ ಎಂಬುದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು. ಆ ಪತ್ರ ಮತ್ತು ನೀವು ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನೀವು ಈ ತಿಂಗಳು ಹಣವನ್ನು ಪಡೆದು ಮುಂದಿನ ತಿಂಗಳು ಹಣ ಬರಬೇಕು ಎಂದರೆ ನಿಮಗೆ ಎಲ್ಲಿಯೂ ಉದ್ಯೋಗ ದೊರೆಯಲಿಲ್ಲ ಎಂಬ ಸ್ವಯಂ ಘೋಷಿತ ನಿರುದ್ಯೋಗಿ ಪ್ರಮಾಣ ಪತ್ರವನ್ನು ಪ್ರತಿ ತಿಂಗಳು ಸಲ್ಲಿಸಬೇಕಾಗುತ್ತದೆ. ನೀವು ಪ್ರಮಾಣ ಪತ್ರವನ್ನು ಸಲ್ಲಿಸದೆ ಇದ್ದರೆ ನಿಮಗೆ ಉದ್ಯೋಗ ದೊರಕಿದೆ ಎಂದು ಪರಿಗಣಿಸಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಆದರಿಂದ ನೀವು ಪ್ರತಿ ತಿಂಗಳು ಸಹ self declaration ಪತ್ರವನ್ನು ಸಲ್ಲಿಸಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿಯನ್ನು ಹೇಗೆ ಪರಿಶೀಲನೆ ಮಾಡಲಾಗುತ್ತದೆ?: ನ್ಯಾಷನಲ್ ಅಕಾಡೆಮಿ ಡೆಪಾಸಿಟರಿ ಕೇಂದ್ರದಲ್ಲಿ ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳ ಪದವಿ ಪಡೆದವರ ಪ್ರಮಾಣ ಪತ್ರಗಳು ಇರುತ್ತವೆ. ಅಲ್ಲಿಂದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಅಲ್ಲಿನ ಮಾಹಿತಿಯ ಅನುಸಾರ ನಿಮ್ಮ ಅರ್ಜಿಗಳನ್ನು ಪರಿಶೀಲಿಸಿ ನಂತರ ಅರ್ಜಿ ಸ್ವೀಕಾರ ಆಗಲಿದೆ. ಹಾಗೂ ಯಾವುದೇ ಬ್ಯಾಂಕ್ ನಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಏನಾದರೂ ಪಡೆದಿದ್ದರೆ ಅದನ್ನು ಪರಿಗಣಿಸುತ್ತಾರೆ. 

ಯುವನಿಧಿ ಯೋಜನೆಯ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಏನು?: ಅರ್ಜಿ ಸಲ್ಲಿಸಲು ಅಭ್ಯರ್ಥಿಯು 2022-23 ರಲ್ಲಿ ಪದವಿ ಅಥವಾ ಡಿಪ್ಲೊಮಾ ಮುಗಿಸಿ ಎಲ್ಲಿಯೂ ಉದ್ಯೋಗ ಸಿಗದೆ ಅಥವಾ ಯಾವುದೇ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳದೆ ಇರುವವರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಕರ್ನಾಟಕದ ಮೂಲ ನಿವಾಸಿ ಆಗಿರಬೇಕು. 

ಅರ್ಜಿ ಸಲ್ಲಿಸುವುದು ಹೇಗೆ?: ಯುವನಿಧಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಅಥವಾ ಹತ್ತಿರದ ಬಾಪೂಜಿ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್ ಸೇರಿದಂತೆ ಅಥವಾ ಗ್ರಾಮ್ ಒನ್ ಸೇವಾ ಕೇಂದ್ರಗಳಿಗೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಶುಲ್ಕವನ್ನು ಇರುವುದಿಲ್ಲ.

ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಸಿಗುವ ಸಹಾಯಧನ ಏಷ್ಟು?

ಯುವನಿಧಿ ಯೋಜನೆಯಲ್ಲಿ(Yuva Nidhi Scheme) 2023-24 ರಲ್ಲಿ ಪದವಿ ಅಥವಾ ಡಿಪ್ಲೊಮಾ ಮುಗಿಸಿ 6 ತಿಂಗಳಾದರೂ ಸಲ ಉದ್ಯೋಗ ದೊರಕದೆ ಇದ್ದಲ್ಲಿ ಪ್ರತಿ ತಿಂಗಳು ಡಿಗ್ರೀ ಮುಗದವರಿಗೆ 3000 ರೂಪಾಯಿ ಹಾಗೂ ಡಿಪ್ಲೊಮಾ ಓದಿದವರಿಗೆ 1500 ರೂಪಾಯಿ ಸಿಗುತ್ತದೆ. ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಕಾಲ ನೀಡಲಾಗುತ್ತದೆ. ಅಭ್ಯರ್ಥಿಗಳು 2 ವರ್ಷಗಳ ಬಳಿಕ ಅಥವಾ 2 ವರ್ಷದ ಒಳಗೆ ಉದ್ಯೋಗ ದೊರೆತರೆ ನಿರುದ್ಯೋಗ ಭತ್ಯೆಯು ನಿಮಗೆ ಸಿಗುವುದಿಲ್ಲ. ನಿಮಗೆ 2ವರ್ಷ ಆದರೂ ಎಲ್ಲಿಯೂ ಉದ್ಯೋಗ ದೊರಕದೆ ಇದ್ದಲ್ಲಿ ಈ ಯೋಜನೆಯು ನಿಲ್ಲುತ್ತದೆ. ಈ ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಯುವನಿಧಿ ಯೋಜನೆ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: ಬಳ್ಳಾರಿ ಗ್ರಾಮ ಪಂಚಾಯಿತಿಯಲ್ಲಿ 14 ಲೈಬ್ರರಿ ಸೂಪರ್ವೈಸರ್ ಹುದ್ದೆಗಳು ಖಾಲಿ ಇವೆ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ… 

ಇದನ್ನೂ ಓದಿ: ಕರ್ನಾಟಕ ಸರ್ಕಾರಿ ನೌಕರರಿಗೆ ಫೆಬ್ರವರಿ ತಿಂಗಳ ಕೊನೆಯಲ್ಲಿ ಎರಡು ದಿನ ವಿಶೇಷ ರಜೆ