Yuva Nidhi Scheme: ಡಿಪ್ಲೋಮಾ ಹಾಗೂ ಪದವೀಧರರಿಗೆ ಸಿಹಿಸುದ್ದಿ; ಯುವನಿಧಿ ಜಾರಿ ಬಗ್ಗೆ ಸಿ.ಎಂ ಘೋಷಣೆ

Yuva Nidhi Scheme: ಡಿಪ್ಲೋಮಾ ಹಾಗೂ ಪದವಿಯನ್ನು ಮುಗಿಸಿದ್ದು, ಉದ್ಯೋಗ ಸಿಗದೇ ಮನೆಯಲ್ಲೇ ಇರುವ ಯುವಕ, ಯುವತಿಯರಿಗೆ ಸರ್ಕಾರದಿಂದ ಮಾಸಿಕ ಹಣ ನೀಡುವ ಬಗ್ಗೆ ಘೋಷಣೆಯಾಗಿದೆ. ಡಿಪ್ಲೋಮಾ ಪದವಿಯನ್ನು ಮುಗಿಸಿ ನಿರುದ್ಯೋಗಿಯಾಗಿದ್ದ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಯುವನಿಧಿ ಯೋಜನೆಯನ್ನ ಡಿಸೆಂಬರ್ ನಲ್ಲಿ ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ವಿದ್ಯೆಯನ್ನ ಮುಗಿಸಿ ಆರು ತಿಂಗಳುಗಳ ಕಾಲ ಉದ್ಯೋಗ ಸಿಗದೆ ಮನೆಯಲ್ಲಿ ಕುಳಿತ ಗಂಡು ಹಾಗೂ ಹೆಣ್ಣು ಮಕ್ಕಳಿಗಾಗಿ ಮಾಸಿಕ ಭತ್ಯೆಯನ್ನ ನೀಡುವುದಾಗಿ ಮೊದಲೇ ಹೇಳಿದಂತೆ, ಜನವರಿ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now

ಹೇಳಿದ ಹಾಗೆ ಜನವರಿಲ್ಲಿ ಆರು ತಿಂಗಳ ಮುಕ್ತಾಯವಾಗುವುದು ಆದ್ದರಿಂದ ಇವರಿಗೆಲ್ಲ ಮಾಸಿಕ ಭತ್ಯೆ ಯನ್ನು ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಆರು ತಿಂಗಳಾದರೂ ಕೆಲಸ ಸಿಕ್ಕಿಲ್ಲ ಅಂತ ಪರದಾಡುತ್ತಿರುವ ಯುವಕ ಯುವತಿಯರಿಗೆ ಮಾಸಿಕ ಭತ್ಯೆ 3000 ರೂಪಾಯಿಗಳು ಹಾಗೂ ನಿರುದ್ಯೋಗಿ ಡಿಪ್ಲೋಮಾ ಪದವಿದರರಿಗೆ 1500 ರೂಪಾಯಿಗಳ ಮಾಸಿಕ ಭತ್ಯೆಯನ್ನು ನೀಡಲಾಗುವುದು. ಈ ವಿಚಾರವನ್ನು ಚುನಾವಣೆಗೂ ಮೊದಲೇ ಕಾಂಗ್ರೆಸ್ ಘೋಷಿಸಿತ್ತು. ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಉದ್ಯೋಗ ಸಿಗುವವರೆಗೂ ಕೂಡ ಮಾಸಿಕ ಭತ್ಯಗಳನ್ನು ನೀಡಲಾಗುತ್ತದೆ. ಪ್ರತಿ ತಿಂಗಳು ಇವರಿಗೆ ಹಣವನ್ನು ತಲುಪುವಂತೆ ಮಾಡುತ್ತೇವೆ ಹಾಗೂ ಐದು ಶಕ್ತಿ ಯೋಜನೆಗಳಲ್ಲಿ ಈ ಯುವನಿಧಿ ಯೋಜನೆಯೂ ಕೂಡ ಒಂದು ಎಂದು ಸಿದ್ದರಾಮಯ್ಯನವರು ಸ್ಪಷ್ಟೀಕರಿಸಿದ್ದಾರೆ.

ನಾಡಿನ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು. ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗೆ ಬೆಂಬಲವನ್ನ ನೀಡುವುದು ನಮ್ಮ ಕರ್ತವ್ಯ. ನಾವು ಹೇಳಿದಂತೆ ನಡೆದುಕೊಂಡಿದ್ದೇವೆ ಈಗಾಗಲೇ 4 ಯೋಜನೆಗಳನ್ನ ಜಾರಿಗೆ ತರಲಾಗಿದ್ದು ಯುವನಿಧಿ ಯೋಜನೆಯನ್ನು ಕೂಡ ಡಿಸೆಂಬರ್ ಹಾಗೂ ಜನವರಿಯಲ್ಲಿ ಯೋಜನೆಗೆ ತರಲಾಗುವುದು ಎಂದು ಮೊನ್ನೆ ದಸರಾ ಮಹೋತ್ಸವದ ಉದ್ಘಾಟನೆಯಲ್ಲಿ ಸ್ಪಷ್ಟೀಕರಣ ಮಾಡಲಾಗಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮಾಸಿಕ ಭತ್ಯೆ ವರ್ಗಾವಣೆಯಾಗುವ ದಿನಾಂಕ

ಚುನಾವಣೆಗೂ ಮೊದಲೇ ಐದು ಯೋಜನೆಗಳನ್ನ ಜಾರಿಗೆ ತರಲಾಗುವುದು ಎದ್ದು ಘೋಷಿಸಿದ್ದೆವು. ಅದರ ಪೈಕಿ ಅದಾಗಲೇ ನಾನು ಯೋಜನೆಗಳು ಜಾರಿಗೆ ಬಂದಿದ್ದು, ಗೃಹಲಕ್ಷ್ಮಿ ಯೋಜನೆ ಅನ್ನ ಭಾಗ್ಯ ಯೋಜನೆ, ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ ಈ 4 ಯೋಜನೆಗಳನ್ನು ಈಗಲೇ ಜಾರಿಗೆ ತಂದಿದ್ದು, ಇನ್ನು ಉಳಿದ ಯುವನಿಧಿ ಯೋಜನೆಯನ್ನ ಜನವರಿಯಲ್ಲಿ ಜಾರಿಗೊಳಿಸಲಾಗುವುದು.

ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಹೇಳಿದ ಹಾಗೆ ಎಲ್ಲರಿಗೂ ಹಂಚಿಕೆಯಾಗುವ ರೀತಿಯಲ್ಲಿ ಈ ಐದು ಗ್ಯಾರಂಟಿ ಯೋಜನೆಗಳಿಂದ ಎಲ್ಲರೂ ಲಾಭ ಪಡೆದುಕೊಳ್ಳಬಹುದಾಗಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಐದನೇ ಯೋಜನೆಯಾದ ಯುವನಿಧಿ ಯೋಜನೆಯನ್ನ(Yuva Nidhi Scheme) ಜಾರಿಗೆ ತರಲಾಗುವುದು. ವಿದ್ಯೆಯನ್ನ ಮುಗಿಸಿ ಮನೆಯಲ್ಲಿ ಕುಳಿತ ಹಾಗೂ ಉದ್ಯೋಗವನ್ನು ಹುಡುಕುತ್ತಿರುವ ಯುವಕ ಮತ್ತು ಯುವತಿಯರಿಗೆ, ಪದವೀಧರರಿಗೆ 3000 ರೂಪಾಯಿಗಳು ಹಾಗೂ ಡಿಪ್ಲೋಮಾ ಪದವಿದರರಿಗೆ ತಲಾ 1,500 ರೂಪಾಯಿಗಳು ಹಂಚಿಕೆಯಾಗಲಿವೆ.

ಇದನ್ನೂ ಓದಿ: ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಯಾವ ಯಾವ ದಾಖಲಾತಿಗಳು ಬೇಕು?

ಇದನ್ನೂ ಓದಿ: ಸರಿಗಮಪ ವೇದಿಕೆಗೆ ಎಂಟ್ರಿ ಕೊಟ್ಟ ಹಳ್ಳಿ ಪ್ರತಿಭೆ; ಕುರಿಗಾಯಿ ರಮೇಶ್ ಲಮಾಣಿ ಗಾಯನಕ್ಕೆ ತಲೆದೂಗದವರಿಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram