ಯುವನಿಧಿ ಹಣವನ್ನು ಪಡೆಯುವವರು ಪ್ರತಿ ತಿಂಗಳು ಸ್ವಯಂ ಘೋಷಿತ ನಿರೋದ್ಯೋಗ ಪ್ರಮಾಣ ಪತ್ರ ನೀಡಬೇಕು..

Yuva Nidhi Scheme

Yuva Nidhi Scheme: ಕಾಂಗ್ರೆಸ್ ಸರಕಾರವು ಚುನಾವಣಾ ಪ್ರಚಾರದ ವೇಳೆ 5 ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡುವುದಾಗಿ ಹೇಳುತ್ತಿ . ನುಡಿದ ಮಾತಿನಂತೆ ಈಗ ಅನ್ನಭಾಗ್ಯ , ಗೃಹಲಕ್ಷ್ಮಿ , ಹಾಗೂ ಮಹಿಳೆಯರು ಉಚಿತ ಬಸ್ ಪ್ರಯಾಣ ಈಗಾಗಲೇ ಜಾರಿಯಲ್ಲಿ ಇದೆ. ಈಗ ಯುವನಿಧಿ ಯೋಜನೆಗೆ(Yuva Nidhi Scheme) ಅರ್ಜಿ ಆಹ್ವಾನ ಮಾಡಿದೆ . ಮಾರ್ಚ್ ಅಂತ್ಯದ ಒಳಗೆ ನಾಲ್ಕು ಲಕ್ಷ ನೋಂದಣಿಯ ಗುರಿಯನ್ನು ಸರ್ಕಾರ ಹೊಂದಿದೆ.

WhatsApp Group Join Now
Telegram Group Join Now

ಯುವನಿಧಿ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿ:- ನಿರುದ್ಯೋಗದ ಸಮಸ್ಯೆಯಿಂದ ಯುವಜನತೆ ಬಳಲುತ್ತಿದ್ದಾರೆ. ಉನ್ನತ ವ್ಯಾಸಂಗ ಮಾಡಿದರೂ ಸಹ ಸರಿಯಾದ ಉದ್ಯೋಗ ಸಿಗುವಲ್ಲಿ ವಿಫಲರಾಗುತ್ತಾರೆ. ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ಉದ್ಯೋಗ ಸಿಗುವುದು ಬಹಳ ಮುಖ್ಯ. ಅದನ್ನು ಅರಿತು ಸರ್ಕಾರ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಉದ್ಯೋಗ ಇಲ್ಲದೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕ ಯುವತಿಯರಿಗೆ ಉದ್ಯೋಗ ಸಿಗುವಲ್ಲಿಯವರೆಗೆ ಅವರ ವಿದ್ಯಾರ್ಹತೆಯ ಆಧಾರದ ಮೇಲೆ ಅವರಿಗೆ ಸರಕಾರ ಪ್ರತಿ ತಿಂಗಳು ಸಹಾಯಧನದ ರೂಪದಲ್ಲಿ ಹಣವನ್ನು ನೀಡುತ್ತದೆ. ಡಿಪ್ಲೊಮಾ ಓದಿದವರಿಗೆ 1500 ರೂಪಾಯಿಗಳು ಮತ್ತು ಡಿಗ್ರಿ ಪಾಸ್ ಆದವರಿಗೆ 3000 ರೂಪಾಯಿಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ತಿಂಗಳು ನೀಡಬೇಕು ಸ್ವಯಂ ಘೋಷಿತ ನಿರೋದ್ಯೋಗ ಪ್ರಮಾಣ ಪತ್ರ:- ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಾ ಇರುವವರು ಪ್ರತಿ ತಿಂಗಳು ಉದ್ಯೋಗ ಸಿಗಲಿಲ್ಲ ಅಥವಾ ಉನ್ನತ ಶಿಕ್ಷಣ ಅಥವಾ ಯಾವುದೇ ಕೋರ್ಸ್ ಗೆ ಜಾಯಿನ್ ಆಗಿಲ್ಲ ಎಂಬ ಪ್ರಮಾಣ ಪತ್ರವನ್ನು ಅರ್ಜಿಯಲ್ಲಿ ಸಲ್ಲಿಸಬೇಕು.

ಡಿಗ್ರಿ ಪಡೆದಿರುವ ಬಗ್ಗೆ ಹೇಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ?: ನ್ಯಾಷನಲ್ ಅಕಾಡೆಮಿ ಡೆಪಾಸಿಟರಿ ಕೇಂದ್ರದಲ್ಲಿ ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳ ಪದವಿ ಪಡೆದವರ ಪ್ರಮಾಣ ಪತ್ರಗಳಿವೆ. ಅಲ್ಲಿಂದ ಮಾಹಿತಿಯನ್ನು ಸಂಗ್ರಹಿಸಿ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಉತ್ತಮ ಸ್ಟೋರೇಜ್ ನೊಂದಿಗೆ ವಿದ್ಯಾರ್ಥಿಗಳಿಗೆಂದೇ ನಿರ್ಮಿಸಲಾದ 5 ಟ್ಯಾಬ್ಲೆಟ್ ಗಳು

ಇಂತವರ ಅಪ್ಲಿಕೇಶನ್ ರಿಜೆಕ್ಟ್ ಆಗುತ್ತವೆ:-

  • 2023 ಇಸವಿಗೆ ಪದವಿ (degree) ಅಥವಾ ಡಿಪ್ಲೊಮಾ ( diploma ) ಪದವಿ ಪೂರ್ಣ ಆಗದೆ ಇದ್ದಲ್ಲಿ.
  • ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿದರೂ ಸುಳ್ಳು ಮಾಹಿತಿ ನೀಡಿದ್ದಲ್ಲಿ.
  • ಸ್ವಂತ ಉದ್ಯೋಗ ಇದ್ದು ಸುಳ್ಳು ಎಂಬುದು ತಿಳಿದಲ್ಲಿ.
  • ಮಾಸ್ಟರ್ಸ್ (masters) ಅಥವಾ ಯಾವುದೇ ಶಾರ್ಟ್ ಟರ್ಮ್ ಕೋರ್ಸ್ ( short term course) ಗೆ ಜಾಯಿನ್ (join) ಆದವರು ಅರ್ಜಿ ಸಲ್ಲಿಸಿದಲ್ಲಿ.
  • ಕರ್ನಾಟಕ ರಾಜ್ಯದ ನಿವಾಸಿಗಳು ಆಗದೆ ಇದ್ದಲ್ಲಿ.
  • ತೇರ್ಗಡೆ ಹೊಂದಿರುವ ಬಗ್ಗೆ ನಿಖರವಾದ ದಾಖಲೆಗಳನ್ನು ನೀಡದೆ ಇದ್ದಲ್ಲಿ.
  • ನಿಮ್ಮ ಬ್ಯಾಂಕ್ ಖಾತೆಯ ಇ ಕೆ ವೈ ಸಿ (ekyc) ಆಗಿರದೆ ಇದ್ದಲ್ಲಿ.
  • ಯಾವುದೇ ಸುಳ್ಳು ಪ್ರಮಾಣಪತ್ರ ಆಗಿದ್ದಲ್ಲಿ ಪರಿಗಣಿಸುವುದಿಲ್ಲ.
  • ಎಸ್ ಎಸ್ ಎಲ್ ಸಿ (sslc)ಮತ್ತು ಪಿ ಯು ಸಿ(puc) ಅಂಕಪಟ್ಟಿ ಲಗತ್ತಿಸದೆ ಇದ್ದಲ್ಲಿ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:-

  • ಡಿಗ್ರಿ ಪ್ರಮಾಣ ಪತ್ರ.
  • ನಿರುದ್ಯೋಗಿ ಎಂಬ ಪ್ರಮಾಣ ಪತ್ರ.
  • ಎಸ್ ಎಸ್ ಎಲ್ ಸಿ (sslc)ಮತ್ತು ಪಿ ಯು ಸಿ(puc) ಅಂಕಪಟ್ಟಿ.
  • ಬ್ಯಾಂಕ್ ಖಾತೆಯ ವಿವರ & ಫೋಟೋ.

ಇದನ್ನೂ ಓದಿ: ಎಲ್ಲರ ಕನಸಿನ Tata Nano EV ಮರಳಿ ಮಾರುಕಟ್ಟೆಗೆ, ಇದರ ಬೆಲೆಯನ್ನು ತಿಳಿಯಬೇಕಾ?