Yuva Rajkumar: ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಸಿನಿಮಾ ರಂಗಕ್ಕೆ ಅಧಿಕೃತ ಪ್ರವೇಶ ಮಾಡಿದೆ. ಹೌದು ಪುನೀತ್ ರಾಜ್ ಕುಮಾರ್ ಅವ್ರ ಉತ್ತರಾಧಿಕಾರಿ ಎಂದು ಬಿಂಬಿತರಾಗಿರುವ ಯುವ ರಾಜ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾದ ಟೈಟಲ್ ಟೀಸರ್ ಕಳೆದ ತಿಂಗಳಷ್ಟೇ ಬಿಡುಗಡೆ ಆಗಿ ಸಿನಿಮಾದ ಮುಹೂರ್ತ ಕೂಡ ನಡೆದಿತ್ತು. ಇದೀಗ ಯುವ ಚಿತ್ರದ ಚಿತ್ರೀಕರಣ ಆರಂಭಗೊಂಡಿದ್ದು ಅಧಿಕೃತವಾಗಿ ಯುವರಾಜಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಕರಣ ಆರಂಭದ ಕುರಿತು ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ.
ದೊಡ್ಮನೆ ಕುಟುಂಬದ ಕುಡಿ ಯುವರಾಜಕುಮಾರ್ ನಟನೆಯ ಹೊಸ ಸಿನಿಮಾದ ಮುಹೂರ್ತ ಕಳೆದ ತಿಂಗಳು ಸುಬ್ರಮಣ್ಯ ದೇವಸ್ಥಾನದಲ್ಲಿ ಸಿಂಪಲ್ ಆಗಿ ನಡೆದಿತ್ತು. ಹೌದು ಕಳೆದ ಒಂದು ವರ್ಷದಿಂದ ಈ ಸಿನಿಮಾ ಬಗ್ಗೆ ನಾನಾ ರೀತಿಯ ಸುದ್ದಿಗಳು ಹೊರ ಬರುತ್ತಿದ್ದವು. ಇಂದು ನಾಳೆ ಅಂದುಕೊಂಡು ಒಂದು ವರ್ಷಗಳ ಕಾಲ ಸಿನಿಮಾದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಕಳೆದ ತಿಂಗಳಷ್ಟೇ ಈ ಸಿನಿಮಾ ಕುರಿತು ಹಲವು ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿತ್ತು . ಇನ್ನು ಈ ಸಿನಿಮಾ ಮೂಲಕ ಪುನೀತ್ ರಾಜಕುಮಾರ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿರುವ ಯುವರಾಜಕುಮಾರ್ ಅಧಿಕೃತವಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಹೌದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಪುನೀತ್ ರಾಜಕುಮಾರ್ ಜೊತೆ ಒಳ್ಳೆಯ ಬಾಂಧವ್ಯ ಹಾಗೂ ಅವರ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರೆ, ನುರಿತ ತಂತ್ರಜ್ಞರ ತಂಡವೇ ಸಿನಿಮಾದಲ್ಲಿದೆ.ಅಂದುಕೊಂಡಂತೆ ಆಗಿದ್ದರೆ ಯುವರಾಜಕುಮಾರ್ ಈ ಹಿಂದೆಯೇ ಲಾಂಚ್ ಆಗಬೇಕಿತ್ತು. ಆದರೆ ಯುವ ಅವ್ರಿಗಾಗಿಯೇ ‘ಯುವ ರಣಧೀರ ಕಂಠೀರವ’ ಸಿನಿಮಾ ಮಾಡಲು ಜಾಕಿ ತಿಮ್ಮಯ್ಯ ಸಿದ್ಧತೆ ಮಾಡಿಕೊಂಡು ಸಾಕಷ್ಟು ಹಣ ಖರ್ಚು ಮಾಡಿ ಟೀಸರ್ ಕೂಡ ರಿಲೀಸ್ ಮಾಡಿದ್ದರು. ಆದರೆ, ಆ ಸಿನಿಮಾ ಮುಂದುವರೆಯಲಿಲ್ಲ. ಈ ಕಾರಣದಿಂದಾಗಿ ಸಂತೋಷ್ ಆನಂದ್ ರಾಮ್ ಅವರ ಚಿತ್ರವೇ ಯುವ ನಟನೆಯ ಚೊಚ್ಚಲ ಸಿನಿಮಾವಾಗಿದೆ.
ಇನ್ನು ಯುವರಾಜ್ ನಟನೆಯ ಮೊದಲ ಸಿನಿಮಾಗೆ ಶೀರ್ಷಿಕೆ ಏನಿರಬಹುದು ಎನ್ನುವ ಕುತೂಹಲ ಹಲವು ದಿನಗಳಿಂದ ಎಲ್ಲರಲ್ಲು ಮುಡಿತ್ತು. ಅದಕ್ಕೂ ತೆರೆ ಬಿದ್ದಿದೆ. ಹೌದು ಚಿತ್ರರಂಗಕ್ಕೆ ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡಲು ಮತ್ತು ಸಿನಿಮಾದ ಶೀರ್ಷಿಕೆ ಇಡಲು ಹಲವು ರೀತಿಯಲ್ಲಿ ಯೋಚನೆ ಮತ್ತು ಯೋಜನೆಯನ್ನು ಸಿದ್ಧ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. ಇದರ ಭಾಗವಾಗಿ ಮೂರು ಸಿನಿಮಾ ಶೀರ್ಷಿಕೆಗಳನ್ನೂ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿತ್ತು. ಡಾ.ರಾಜ್ ನಟನೆಯ ಜ್ವಾಲಾಮುಖಿ ಮತ್ತು ಅಶ್ವಮೇಧ ಚಿತ್ರಗಳ ಶೀರ್ಷಿಕೆಯನ್ನೂ ಆಯ್ಕೆ ಮಾಡಿತ್ತು. ಆದರೆ, ಕೊನೆಯ ಬದಲಾವಣೆ ಎನ್ನುವಂತೆ ‘ಯುವ’ ಟೈಟಲ್ ಅನ್ನು ಅಂತಿಮಗೊಳಿಸಿದೆ.
“ಯುವ” ಟೈಟಲ್ ಫಿಕ್ಸ್ ಆಗಿದ್ದು ಹೇಗೆ ಗೊತ್ತಾ?
ಈಗಾಗಲೇ ಚಿತ್ರೋದ್ಯಮದಲ್ಲಿ ಯುವರಾಜ್ ಕುಮಾರ್, ‘ಯುವ’ ಹೆಸರಿನಲ್ಲಿ ಬ್ರ್ಯಾಂಡ್ ಆಗಿದ್ದಾರೆ. ಅಲ್ಲದೇ, ಪುನೀತ್ ರಾಜ್ ಕುಮಾರ್ ಮೊದಲ ಸಿನಿಮಾ ‘ಅಪ್ಪು ಕೂಡ ಹೀಗೆಯೇ ಆಯ್ಕೆಯಾಗಿದ್ದು. ಈ ಎಲ್ಲವನ್ನೂ ಅಳೆದು ತೂಗಿ ಕೊನೆಗೂ ‘ಯುವ’ ಟೈಟಲ್ ಅನ್ನೇ ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆ ಅಂತಿಮಗೊಳಿಸಿದ್ದಾರೆ. ಮೊದಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ‘ಅಪ್ಪು’ ಆಗಿ ಫೇಮಸ್ ಆದರು. ಯುವರಾಜ್ ಕುಮಾರ್ ಕೂಡ ‘ಯುವ’ ಹೆಸರಿನಿಂದಲೇ ಮುಂದುವರೆಯಲಿ ಎನ್ನುವ ಗುರಿಯೂ ಈ ಟೈಟಲ್ ಹಿಂದಿದೆ. ಈಗಾಗಲೇ ಯುವ ಟೈಟಲ್ ಅನ್ನು ಎಲ್ಲರೂ ಮೆಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕೂಡ ಆಗಿದ್ದು, ಇದು ಸೂಕ್ತ ಟೈಟಲ್ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಸಿನಿಮಾದ ಕಥೆಯಲ್ಲೂ ನಾಯಕನ ಪಾತ್ರ ಯುವ ಹೆಸರಿನಿಂದಲೇ ಇರುವುದು ಪಕ್ಕಾ ಆಗಿದೆ.
ಇದನ್ನು ಓದಿ : ಮುಕೇಶ್ ಅಂಬಾನಿಯ ಫ್ರೀ ಐಪಿಎಲ್ ಹಿಂದಿನ ಕರಾಳ ರಹಸ್ಯ
ಸಂತೋಷ್ ಆನಂದ್ ರಾಮ್ ಹೊಸ ರೀತಿಯಲ್ಲಿ ಕಥೆ ಬರೆದುಕೊಂಡು ಯುವರಾಜ್ ಕುಮಾರ್ ಅವರನ್ನು ಲಾಂಚ್ ಮಾಡುತ್ತಿದ್ದಾರೆ. ಹೀಗಾಗಿ ಸಿನಿಮಾ ಕುರಿತು ಸಿಕ್ಕಾಪಟ್ಟೆ ಕ್ರೇಜ್ ಶುರುವಾಗಿದ್ದು ದೊಡ್ಮನೆ ಅಭಿಮಾನಿಗಳಂತು ಸಿನಿಮಾ ಕುರಿತ ಹೊಸ ಅಪಡೇಟ್ಸ್ ಗಾಗಿ ಕಾದುಕುಳಿತಿದ್ದಾರೆ. ಹೀಗಿರುವಾಗ ಸ್ವತಃ ಯುವ ರಾಜಕುಮಾರ್ ಅವರೇ ಸಿನಿಮಾ ಬಗ್ಗೆ ಸಿನಿಮಾ ಚಿತ್ರೀಕರಣದ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದು, ಸಿನಿಮಾ ಚಿತ್ರೀಕರಣ ಶುರುವಾಗಿದ್ದು, ಶುಭ ಆರೈಸಿ ಅಂತ ಬರೆದುಕೊಂಡಿದ್ದಾರೆ.
ಇದನ್ನು ಓದಿ : ಮದುವೆಯಾಗಿ ಸುಖವಾಗಿದ್ರು ವಿನೋದ್ ರಾಜ್ ಸುಳ್ಳು ಹೇಳುದ್ರ??