ಪ್ರತಿಭೆ ಯಾರಪ್ಪನ ಮನೆಯ ಸ್ವತ್ತು ಅಲ್ಲ ಶಿಸ್ತು ಸಂಯಮ ಭಕ್ತಿ ಇದ್ದವರಿಗೆ ದೇವರು ಒಲಿಯುತ್ತಾನೆ ಅನ್ನೋದು ಸುಳ್ಳಲ್ಲ. ಹೌದು ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ತಾಂಡಾದಲ್ಲಿದ್ದ ಹನುಮಂತ ಗಾನ ಪ್ರತಿಭೆಗೆ ಖುದ್ದು ಹಂಸಲೇಖ ಬೆರಗಾಗಿದ್ದರು. ಅಲ್ಲದೇ ಜನಪದ ಕಲೆಯನ್ನು ಉಳಿಸುವ ಕಲಾವಿದ ನೀನೆಂದು ಹನುಮಂತನಿಗೆ ಹರಸಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಅನೇಕ ಸಿನಿಮಾ ಮಂದಿ ಹನುಮಂತನಿಗೆ ಅವಕಾಶ ಕೊಡುವುದಾಗಿ ಹೇಳಿದರು. ಅದೇ ರೀತಿ ಯೋಗರಾಜ್ ಭಟ್ ಅವರು ಕೂಡ `ನಮ್ ಬಯಲು ಸೀಮೆ ಕಡೆ ಹುಡುಗ. ನನ್ ಸಿನ್ಮಾದಲ್ಲಿ ಹಾಡಿಸ್ತಿನಿ’ ಎಂದು ಹೇಳಿ ಹನುಮಂತನಿಗೆ ಅವಕಾಶ ನೀಡಿದ್ದರು. ಯೋಗರಾಜ್ ಭಟ್ ಕೂಡ ಮೂಲತಃ ಹಾವೇರಿ ಜಿಲ್ಲೆಯವರಾಗಿದ್ದಾರೆ.
ಯೋಗರಾಜ್ ಭಟ್ ಅವರಿಗೆ ಸಂಗೀತ ಅಂದರೆ ದೇವರ ಸಮಾನ. ಆದ್ದರಿಂದ ಸಂಗೀತ ಪ್ರಿಯರನ್ನು ಗೌರವಿಸುವ ಭಟ್ರು ಹನುಮಂತನ ಕಂಠಕ್ಕೆ ಸೂಕ್ತ ಬಹುಮಾನ ಕೊಡುವುದಕ್ಕೆ ಮನಸ್ಸು ಮಾಡಿದ್ದರು. ಯೋಗರಾಜ್ ಅವರು ಹನುಮಂತ ಹಾಡುವುದಕ್ಕೆ ಸುಲಭವಾಗುವ ಪದದಲ್ಲಿ ತಾವೇ ಸಾಹಿತ್ಯ ಬರೆಯೋಕೆ ಸಿದ್ಧರಾಗಿದ್ದರು. ಸರಿಗಮಪ ಕಾರ್ಯಕ್ರಮದ ಜಡ್ಜ್ ಆಗಿರುವ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬರಲಿದೆ. ಇದೀಗ ಹನುಮಂತನನ್ನು ಮೀರಿಸೋ ಮತ್ತೊಂದು ಪ್ರತಿಭೆ ಸರಿಗಮಪ ವೇದಿಕೆಗೆ ಎಂಟ್ರಿ ಕೊಟ್ಟಿದೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಜ್ಜುರು ತಾಂಡಾ ಬೆಟ್ಟಗುಡ್ಡ ಕಾಡುಗಳ ಮಧ್ಯ ಇರುವಂತಹ ಒಂದು ಪುಟ್ಟ ಗ್ರಾಮ. ಈ ಗ್ರಾಮದ ಕುರಿಗಾಯಿ ಕಂಚಿನ ಕಂಠದ ರಮೇಶ್ ಲಮಾಣಿ(Ramesh Lamani) ಕರುನಾಡಿನ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕನೇ ತರಗತಿ ಓದಿರುವ ರಮೇಶ್ ಲಮಾಣಿ ಅವರ ಕನ್ನಡದ ಉಚ್ಚಾರಣೆ, ಸಾಹಿತ್ಯದ ಮೇಲಿನ ಹಿಡಿತ ಎಂತವರನ್ನು ಕೂಡ ನಿಬ್ಬೆರಗಾಗುವಂತೆ ಮಾಡುತ್ತದೆ. ಕನ್ನಡ, ಲಂಬಾಣಿ, ಹಿಂದಿ, ತೆಲುಗು ಹಾಡುಗಳನ್ನು ಅತ್ಯದ್ಭುತವಾಗಿ ಹಾಡುತ್ತಾರೆ. ಇಷ್ಟೊಂದು ಅದ್ಭುತವಾಗಿ ತನ್ನ ಕಂಠದಲ್ಲಿ ಹಾಡುಗಳು ಮೂಡಲು ದಿವಂಗತ ವರನಟ ಡಾಕ್ಟರ್ ರಾಜಕುಮಾರ್ ಅವರೇ ಕಾರಣ ಅಂತ ರಮೇಶ್ ಲಮಾಣಿ ಹೇಳಿಕೊಂಡಿದ್ದಾರೆ. ಹೌದು ರಮೇಶ್ ಅವರ ತಂದೆಗೆ ಡಾಕ್ಟರ್ ರಾಜಕುಮಾರ್ ಅವರ ಹಾಡುಗಳಂದ್ರೆ ತುಂಬಾ ಇಷ್ಟ ವಂತೆ. ಹೀಗಾಗಿ ಅವರ ಮನೆಯ ಟೇಪ್ ರೆಕಾರ್ಡರಲ್ಲಿ ರಾಜಕುಮಾರ್ ಅವ್ರ ಹಾಡುಗಳನ್ನು ಹಾಕ್ತಿದ್ರಂತೆ ಇದನ್ನು ಕೇಳಿ ತಾನು ಹಾಡೋದನ್ನ ಕಲಿತೆ ಅಂತ ರಮೇಶ್ ಲಮಾಣಿ ಹೇಳಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಸರಿಗಮಪ ವೇದಿಕೆಗೆ ಬಂದ ಹನುಮಂತನನ್ನ ಮೀರಿಸೋ ಪ್ರತಿಭೆ
ಇನ್ನು ಇದಾದ ನಂತರ ಕುರಿಗಾಯಿ ವೃತ್ತಿಯನ್ನ ಆರಿಸಿಕೊಂಡ ರಮೇಶ್ ಮೊಬೈಲ್ ನಲ್ಲಿ ಹಾಡುಗಳನ್ನು ಕೇಳುತ್ತಾ ಕುರಿಗಳನ್ನು ಕಾಯ್ತಾ ಹಾಡುಗಳನ್ನು ಅಚ್ಚುಕಟ್ಟಾಗಿ ಹಾಡೋದನ್ನ ಕಲಿತೆ ಅಂತ ಹೇಳಿಕೊಂಡಿದ್ದಾರೆ. ಈ ಮಧ್ಯೆ ತಾನು ಯಾವುದಾದ್ರೂ ದೊಡ್ಡ ವೇದಿಕೆಯಲ್ಲಿ ಹಾಡಬೇಕು ರಿಯಾಲಿಟಿ ಶೋನಲ್ಲಿ ಭಾಗಿಯಾಗಬೇಕು, ಗುರುತಿಸಿಕೊಳ್ಳಬೇಕು ಅನ್ನೋ ಆಸೆ ಇತ್ತಂತೆ. ಅದರಂತೆ ಮೊದಲ ಹೆಜ್ಜೆ ಸಕ್ಸಸ್ ಕಂಡಿದ್ದಾರೆ. ಹೌದು ರಮೇಶ್ ಲಮಾಣಿ ಆಸೆ ಈಡೇರಿದೆ. ಹೌದು ಸರಿಗಮಪ ಸೀಸನ್ 20 ಸ್ಪರ್ಧಿಯಾಗಿ ರಮೇಶ್ ಲಮಾಣಿ ಎಂಟ್ರಿ ಕೊಟ್ಟಿದ್ದು, ಆಯ್ಕೆ ಕೂಡಾ ಆಗಿದ್ದಾರೆ.
ಹೌದು ಸರಿಗಮಪ ಸೀಸನ್ 20ರ ವೇದಿಕೆಗೆ ಎಂಟ್ರಿಕೊಟ್ಟ ಹಳ್ಳಿ ಪ್ರತಿಭೆ ರಮೇಶ್ ಲಮಾಣಿ(Ramesh Lamani), ಬಾಳುವಂತಹ ಹೂವೇ ಬಾಡುವ ಆಸೆ ಯಾಕೆ ಅನ್ನುವಂತಹ ಎವರ್ಗ್ರೀನ್ ಹಿಟ್ ಹಾಗೂ ಎಲ್ಲರ ಫೇವರೆಟ್ ಹಾಡನ್ನು ತನ್ನ ಕಂಚಿನ ಕಂಠದಲ್ಲಿ ಹಾಡುವ ಮೂಲಕ ಎಲ್ಲರನ್ನು ಕೂಡ ನಿಬ್ಬೆರಗಾಗಿಸುವಂತೆ ಮಾಡಿದ್ದಾರೆ. ಹೌದು ಥೇಟ್ ಹನುಮಂತನ ರೀತಿಯಲ್ಲಿಯೇ ಲುಂಗಿಯಲ್ಲಿ ಎಂಟ್ರಿ ಕೊಟ್ಟ ರಮೇಶ್ ಲಮಾಣಿಯ ಹಾಡನ್ನು ಕೇಳಿದ ಪ್ರತಿಯೊಬ್ಬರು ಕೂಡ ಮಂತ್ರ ಮುಗ್ದರಾದ್ರು. ಎಷ್ಟು ಅದ್ಭುತವಾಗಿ ಹಾಡುದ್ರು ಅಂದ್ರೆ ಪ್ರತಿಯೊಬ್ಬರೂ ಕೂಡ ಆತನನ್ನ ಹಾಡಿ ಹೊಗಳಿದ್ರು, ಕೊನೆಗೆ ನಾದಬ್ರಹ್ಮ ಹಂಸಲೇಖ ಅವರು ಕೂಡ ಕುರಿಗಾಯಿ ರಮೇಶ್ ಲಮಾಣಿಯನ್ನು ಹಾಡಿಹೋಗಲಿ ಆತನನ್ನು ವೇದಿಕೆಯಲ್ಲಿ ಸೆಲೆಕ್ಟ್ ಮಾಡ್ಕೊಂಡ್ರು.
ತಾನು ಕುರಿಗಾಯಿ ಕೆಲಸ ಮಾಡುತ್ತಿದ್ದೀನಿ ಅನ್ನೋದನ್ನ ಬೇಸರದಿಂದಲೇ ಹೇಳಿಕೊಂಡ ರಮೇಶ್ಗೆ ಏ ದಡ್ಡ ಕುರಿ ಕಾಯುವ ವೃತ್ತಿ ಅಂದ್ರೆ ಕಡಿಮೆ ಏನೋ, ಕಾಳಿದಾಸ ಕೂಡ ಕುರಿ ಕಾಯ್ತಿದ್ದ ಕಣೋ ಕುರಿ ಕಾಯ್ತಿದಿನಿ ಅಂತ ಹೆಮ್ಮೆಯಿಂದ ಹೇಳ್ಕೊಳೋ ಅಂತ ಆತನ ವೃತ್ತಿಯನ್ನು ಮೆಚ್ಚಿಕೊಳ್ಳುವಂತೆ ಹಂಸಲೇಖ ಆತನನ ಸಮಾಧಾನಪಡಿಸಿದ ರೀತಿ ಎಲ್ಲರನ್ನ ಕೂಡ ಆಶ್ಚರ್ಯ ಚಿಕಿತನಾಗುವಂತೆ ಮಾಡ್ತು. ಇನ್ನು ಅತ್ಯದ್ಭುತವಾಗಿ ಹಾಡಿದಂತಹ ರಮೇಶ್ ಲಮಾಣಿ ಎಲ್ಲರಿಗೂ ಕೂಡ ಇಷ್ಟವಾಗಿದ್ದು, ಸರಿಗಮಪ ಸೀಸನ್ 20ಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲರೂ ಕೂಡ ಹನುಮಂತನ ನೆನೆಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಹನುಮಂತನ ರೀತಿ ಇವರು ಕೂಡ ಫೇಮಸ್ ಸಿಂಗರ್ ಆಗ್ತಾರ ಕಾದು ನೋಡಬೇಕಿದೆ.
ಇದನ್ನೂ ಓದಿ: ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಯಾವ ಯಾವ ದಾಖಲಾತಿಗಳು ಬೇಕು?
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram